ಸಮದರ್ಶಿತನ
Verses
ಸ್ನೇಹಿತರು. ಶತ್ರುಗಳು ಆಗಂತುಕರು ಎಂಬ ಆಯಾ ಪಕ್ಷಗಳ ಬಗ್ಗೆ ನಿಷ್ಪಕ್ಷಪಾತವಾಗಿ ಒಪ್ಪಿ ನಡೆದುಕೊಂಡರೆ ಅದೇ ಸಮದರ್ಶಿತನವೆಂಬ ನಡತೆ(ಧರ್ಮ)ಯೆನಿಸಿಕೊಳ್ಳುತ್ತದೆ.
Tamil Transliteration
Thakudhi Enavondru Nandre Pakudhiyaal
Paarpattu Ozhukap Perin.
ಸಮದರ್ಶಿತನವುಳ್ಳವನ ಸಂಪತ್ತು (ಐಶ್ವರ್ಯ), ಅಳಿವಿಲ್ಲದೆ ಅವನ ವಂಶದವರಿಗೆಲ್ಲಾ ಆಧಾರವಾಗಿ ಒಳಿತನ್ನು ಉಂಟುಮಾಡುತ್ತದೆ.
Tamil Transliteration
Seppam Utaiyavan Aakkanj Chidhaivindri
Echchaththir Kemaappu Utaiththu.
ಸಮದರ್ಶಿತನವನ್ನು ತೊರೆದು ಉಂಟಾಗುವ ಸಂಪತ್ತು, (ಅದು ನಮಗೆ) ಒಳಿತನ್ನೇ ತಂದರೂ ಒಡನೆಯೇ ಕೈಬಿಡಬೇಕು.
Tamil Transliteration
Nandre Tharinum Natuvikandhaam Aakkaththai
Andre Yozhiya Vital.
ಸಮಭಾವವುಳ್ಳವರೆ, ಅಲ್ಲವೆ ಎಂಬುದನ್ನು ಅವರವರ ಮಕ್ಕಳ (ಸಂತತಿ) ಹಿನ್ನೆಲೆಯಿಂದ ತಿಳಿಯಬಹುದು.
Tamil Transliteration
Thakkaar Thakavilar Enpadhu Avaravar
Echchaththaar Kaanap Patum.
ಬಡತನ, ಸಿರಿತನಗಳೆರಡೂ ಇಲ್ಲದಿರುವುದೇನಲ್ಲ, ಅವು ಅವರವರ ಕರ್ಮಫಲಗಳು; ಈ ಎರಡು ಸ್ಥಿತಿಗಳಲ್ಲೂ ಹೃದಯದಲ್ಲಿ ಸಮಭಾವದಿಂದ ನಡೆದುಕೊಂಡರೆ, ಸಂಪನ್ನರಾದವರಿಗೆ ಅದೇ ಅಲಂಕಾರವೆನಿಸಿಕೊಳ್ಳುವುದು.
Tamil Transliteration
Ketum Perukkamum Illalla Nenjaththuk
Kotaamai Saandrork Kani.
ಸಮದರ್ಶಿತನವನ್ನು ಮರೆತು ಅಲ್ಲದುದನ್ನು ಮಾಡಿದರೆ ತಾನು ಕೆಡುತ್ತೇನೆ ಎಂಬುದನ್ನು ತನ್ನ ಮನಸ್ಸು ಅರಿಯಲಿ
Tamil Transliteration
Ketuvalyaan Enpadhu Arikadhan Nenjam
Natuvoreei Alla Seyin.
ಸಮದರ್ಶಿಯಾಗಿ ಧರ್ಮದಿಂದ ಬಾಳಿದವನು, ಬಡತನದಲ್ಲಿ ಸಿಕ್ಕಿದರೂ ಅದನ್ನು ಕೇಡೆಂದು ಲೋಕ ಭಾವಿಸಿ ಅವನನ್ನು ಅಗೌರವಿಸುವುದಿಲ್ಲ.
Tamil Transliteration
Ketuvaaka Vaiyaadhu Ulakam Natuvaaka
Nandrikkan Thangiyaan Thaazhvu.
ಮೊದಲೇ ತಾನು ಸಮನಾಗಿ ನಿಂತು, ಸರಿತೂಗುವ ತಕ್ಕಡಿ ಕೋಲಿನಂತೆ, ಒಂದು ಪಕ್ಕಕ್ಕೆ ಬಾಗದೆ ಸಮತೋಲವನ್ನು ತೋರಿಸುವುದು ತಿಳಿದವರಿಗೆ ಭೂಷಣ.
Tamil Transliteration
Samanseydhu Seerdhookkung Kolpol Amaindhorupaal
Kotaamai Saandrork Kani.
ಮನಸ್ಸು ಪಕ್ಷಪಾತವೆಳಸದಿರುವ ಸ್ಥಿತಿಯನ್ನು ಮುಟ್ಟಿದಮೇಲೆ, ನುಡಿಯಲ್ಲಿಯೂ ನೇರವಾಗಿರುವುದು ಸಮದರ್ಶಿತನವೆನಿಸಿಕೊಳ್ಳುವುದು.
Tamil Transliteration
Sorkottam Illadhu Seppam Orudhalaiyaa
Utkottam Inmai Perin.
ಪರರ ವಸ್ತುಗಳನ್ನು ತಮ್ಮ ವಸ್ತುಗಳಂತೆ ಪ್ರೀತಿಸಿ ಕಾಪಾಡಿದರೆ, ವಣಿಜರಿಗೆ ಅದೇ ನಿಜವಾದ ವ್ಯವಹಾರ ಧರ್ಮವೆನಿಸಿಕೊಳ್ಳುವುದು.
Tamil Transliteration
Vaanikam Seyvaarkku Vaanikam Penip
Piravum Thamapol Seyin.