ವಿವರ್ಣ ವೇದನೆ
Verses
ನನ್ನನ್ನು ಪ್ರೀತಿಸಿದ ನಲ್ಲನಿಗೆ ನನ್ನಿಂದ ಅಗಲಿರಲು ಅನುಮತಿ ನೀಡಿದೆ ಆದರೆ ವಿವರ್ಣವಾದ ನನ್ನ ಸ್ಥಿತಿಯನ್ನು ಮತ್ತೆ
ಯಾರಿಗೆ ಹೇಳಿಕೊಳ್ಳಲಿ?
Tamil Transliteration
Nayandhavarkku Nalkaamai Nerndhen Pasandhaven
Panpiyaarkku Uraikko Pira.
ಅವರು (ಇನಿಯರು) ಕೊಟ್ಟರು ಎನ್ನುವ ಗರ್ವದಿಂದ ವೈವರ್ಣ್ಯವು ನನ್ನ ಒಡಲಿನ ಮೇಲೇರಿ, ಸವಾರಿ ಮಾಡುತ್ತಿದೆ.
Tamil Transliteration
Avardhandhaar Ennum Thakaiyaal Ivardhandhen
Menimel Oorum Pasappu.
ಅವರು ಕಾಮವೇದನೆಯನ್ನೂ, ವೈವರ್ಣ್ಯವನ್ನೂ ನನಗೆ ಕೊಟ್ಟು ಅದಕ್ಕೆ ಪ್ರತಿಯಾಗಿ (ನನ್ನ) ಸೌಂದರ್ಯ, ನಾಚಿಕೆಗಳನ್ನು
ಕಸಿದುಕೊಂಡರು.
Tamil Transliteration
Saayalum Naanum Avarkontaar Kaimmaaraa
Noyum Pasalaiyum Thandhu.
ನಾನು ಅವರ ಇನಿಮಾತುಗಳನ್ನೇ ನೆನೆಯುತ್ತೆನೆ; ಅವರ ಸ್ವಭಾವ ಗುಣಗಳನ್ನು ಕುರಿತು (ಸಖಿಯರೆದುರು) ಹೇಳುತ್ತಿರುತ್ತೇನೆ;
ಆದರೂ ವಿವರ್ಣತೆ ನನ್ನನ್ನಾವಂಸುತ್ತಿದೆ. ಇದೇನು ವಂಚನೆಯೋ ತಿಳಿಯದಾಗಿದೆ.
Tamil Transliteration
Ulluvan Manyaan Uraippadhu Avardhiramaal
Kallam Piravo Pasappu.
ಅದೋ ನೋಡು! ನನ್ನ ಇನಿಯನು ಅಗಲಿ ಹೋಗುತ್ತಿದ್ದಾನೆ! ಇದೋ ನೋಡು! ನನ್ನ ಶರೀರವು ವೈವರ್ಣ್ಯವನ್ನು ತಾಳುತ್ತಿದೆ!
Tamil Transliteration
Uvakkaanem Kaadhalar Selvaar Ivakkaanen
Meni Pasappoor Vadhu.
ಬೆಳಕಿನ ನಾಶವನ್ನೇ ಎದುರು ನೋಡುವ ಇರುಳಿನಂತೆ, ಇನಿಯನ ಅಪ್ಪುಗೆಯ ನಡಲಿಕೆಯನ್ನೇ ಎದುರು ನೋಡುತ್ತಿದೆ ವೈವರ್ಣ್ಯವು.
Tamil Transliteration
Vilakkatram Paarkkum Irulepol Konkan
Muyakkatram Paarkkum Pasappu.
ನಾನು (ನಲ್ಲನನ್ನು) ಅಪ್ಪಿಕೊಂಡೆ, ಹಾಗೆಯೇ ತುಸು ಪಕ್ಕಕ್ಕೆ ಸರಿದೆ. ಅಷ್ಟರಲ್ಲಿಯೇ ವಶಪಡಿಸಿಕೊಳ್ಳುವ ಆತುರದಿಂದ ವಿವರ್ಣ್ಯವು
ನನ್ನನ್ನು ಆವರಿಸಿಕೊಂಡಿತು.
Tamil Transliteration
Pullik Kitandhen Putaipeyarndhen Avvalavil
Allikkol Vatre Pasappu.
(ನೋಡುವವರು) ಇವಳು (ಚಿಂತೆಯಿಂದ) ವಿವರ್ಣಳಾಗಿದ್ದಾಳೆ ಎನ್ನುವರಲ್ಲದೆ, ಅವರು (ನನ್ನನ್ನು) (ನಿರ್ದಯ ಮನಸ್ಕರಾಗಿ)
ತೊರೆದು ಹೋದರು ಎಂದು ಹೇಳುವವರು ಯಾರೂ ಇಲ್ಲ.
Tamil Transliteration
Pasandhaal Ivalenpadhu Allaal Ivalaith
Thurandhaar Avarenpaar Il.
ನನ್ನನ್ನು ವಿರಹಕ್ಕೆ ಒಪ್ಪಿಸಿದ ನಲ್ಲನು ಇಂದು ಕುಶಲವಾಗಿರುವರು ಎಂದಾದಲ್ಲಿ ನನ್ನ ಶರೀರವು ನಿಜವಾಗಿ ವೈವರ್ಣ್ಯವನ್ನು ತಾಳಲಿ.
Tamil Transliteration
Pasakkaman Pattaangen Meni Nayappiththaar
Nannilaiyar Aavar Enin.
ನನ್ನನ್ನು ನಯವಾದ ಮಾತುಗಳಿಂದ ಒಪ್ಪಿಸಿ (ವಿರಹಕ್ಕೆ ಕಾರಣನಾದ) ನಲ್ಲನ ನಿರ್ದಯತೆಯನ್ನು ಇತರರು ದೂರುವುದಿಲ್ಲ
ಎನ್ನುವುದಾದರೆ, ನಾನು ವಿವರ್ಣಳಾಗಿದ್ದೇನೆಂಬ ಆಕ್ಷೇಪವನ್ನು ಹೊರುವುದೇ ಲೇಸು!
Tamil Transliteration
Pasappenap Perperudhal Nandre Nayappiththaar
Nalkaamai Thootraar Enin.