ಭಿಕ್ಷಾಟನೆಯ ಭಯ

Verses

Holy Kural #1061
ತಿರಸ್ಕಾರ ಮಾಡದೆ ಸಂತೋಷದಿಂದ ದಾನ ಮಾಡುವ, ಕರುಣೆಯ ಕಣ್ಣುಳ್ಳವರ ಬಳಿಯೂ, ಭಿಕ್ಷೆ ಬೇಡದಿರುವುದೇ ಕೋಟಿ
ಪಾಲು ಉತ್ತಮ.

Tamil Transliteration
Karavaadhu Uvandheeyum Kannannaar Kannum
Iravaamai Koti Urum.

Explanations
Holy Kural #1062
ಲೋಕವನ್ನು ಸೃಷ್ಟಿಸಿದವನು ಜನರು ಭಿಕ್ಷೆ ಬೇದಿ ಜೀವನ ಬಡೆಸಬೇಕೆಂದು ಇಚ್ಛಿಸಿದಲ್ಲಿ ಅವನೂ ಬೇಡುವವರಂತೆ ತಿರಿದು
ಅಲೆದಾಡಿ ಕೆಡಲಿ!

Tamil Transliteration
Irandhum Uyirvaazhdhal Ventin Parandhu
Ketuka Ulakiyatri Yaan.

Explanations
Holy Kural #1063
ಬಡತನವೆಂಬ ದುಃಖವನ್ನು ಭಿಕ್ಷೆ ಬೇಡಿ ತೀರಿಸುತ್ತೇವೆ ಎಂದು ಯೋಚಿಸಿ ಪ್ರಯತ್ನಶೀಲತೆಯನ್ನು ಕೈಬಿಡುವ ಕಠಿಣತೆಗಿಂತ,
ಕಠಿಣವಾದುದು ಬೇರೊಂದು ಇಲ್ಲ.

Tamil Transliteration
Inmai Itumpai Irandhudheer Vaamennum
Vanmaiyin Vanpaatta Thil.

Explanations
Holy Kural #1064
ಬಾಳುವ ಮಾರ್ಗವಿಲ್ಲದಿರುವ ಸಮಯದಲ್ಲಿಯೂ ಭಿಕ್ಷೆ ಬೇಡದಿರುವ ದೊಡ್ಡ ಗುಣವು ಎಲ್ಲ ಲೋಕಗಳಲ್ಲಿಯೂ ಮಿಗಿಲಾದ
ಹಿರಿಮೆಯುಳ್ಳದು.

Tamil Transliteration
Itamellaam Kollaath Thakaiththe Itamillaak
Kaalum Iravollaach Chaalpu.

Explanations
Holy Kural #1065
ಬಾಳುವ ಮಾರ್ಗವಿಲ್ಲದಿರುವ ಸಮಯದಲ್ಲಿಯೂ ಭಿಕ್ಷೆ ಬೇಡದಿರುವ ದೊಡ್ಡ ಗುಣವು ಎಲ್ಲ ಲೋಕಗಳಲ್ಲಿಯೂ ಮಿಗಿಲಾದ
ಹಿರಿಮೆಯುಳ್ಳದು.

Tamil Transliteration
Thenneer Atupurkai Aayinum Thaaldhandhadhu
Unnalin Oonginiya Thil.

Explanations
Holy Kural #1066
ಸಾಯುವ ಸ್ಥಿತಿಯಲ್ಲಿರುವ ಹಸುವಿಗಾಗಿ ಕರುಣೆಯಿಂದ ನೀರನ್ನು ಬೇಡುವ ಸ್ಥಿತಿ ಬಂದರೂ ಬೇಡುವ ನಾಲಿಗೆಗೆ ಅದಕ್ಕಿಂತ
ಅವನತಿ ಬೇರಿಲ್ಲ.

Tamil Transliteration
Aavirku Neerendru Irappinum Naavirku
Iravin Ilivandha Thil.

Explanations
Holy Kural #1067
ಬೇಡುವವರಿಲ್ಲ (ನನ್ನದೊಂದು) ಬೇಡಿಕೆ- "ಬೇಡುವುದಾದರೂ, ಕೊಡಲು ಮನಸ್ಸಿಲ್ಲದವರ ಬಳಿ ಬೇಡದಿರಿ" ಎಂದು

Tamil Transliteration
Irappan Irappaarai Ellaam Irappin
Karappaar Iravanmin Endru.

Explanations
Holy Kural #1068
ಬೇಡುವಿಕೆಯೆನ್ನುವ ಕಾವಲಿಲ್ಲದ ದೋಣಿಯು, ತಿರಸ್ಕಾರವೆನ್ನುವ ಹೆಬ್ಬಂಡೆಯನ್ನು ತಗುಲಿದಾಗ ಒಡೆದು ಚೂರಾಗುವುದು.

Tamil Transliteration
Iravennum Emaappil Thoni Karavennum
Paardhaakkap Pakku Vitum.

Explanations
Holy Kural #1069
ಬೇಡುವುದರ ನೆಲೆಯನ್ನು ನೆನೆಸಿಕೊಂಡರೆ ಹೃದಯವು ಕರಗಿ ಹೋಗುತ್ತದೆ; ಇರುವುದನ್ನು ಕೊಡದೆ ತಿರಸ್ಕರಿಸುವ ನಿರ್ದಯ
ಮನಸ್ಸನ್ನು ನೆನೆಸಿಕೊಂಡರೆ ಕರಗಿ ಉಳಿದ ಹೃದಯವೂ ಇಲ್ಲದಂತೆ ನಾಶವಾಗುತ್ತದೆ.

Tamil Transliteration
Iravulla Ullam Urukum Karavulla
Ulladhooum Indrik Ketum.

Explanations
Holy Kural #1070
ಬೇಡುವವರಿಗೆ 'ಇಲ್ಲ' ಎಂದು ಹೇಳಿದ ಕೊಡಲೇ ಜೀವವು ಹೋಗಿ ಬಿಡುವುದು; ಇರುವುದನ್ನು ಇಲ್ಲ ಎಂದು ಹೇಳಿ ಅಟ್ಟುವ
(ಜಿಪುಣರ), ಪ್ರಾಣವು ಎಲ್ಲಿ ಅವಿತುಕೊಂಡಿರುತ್ತದೆಯೂ!

Tamil Transliteration
Karappavarkku Yaangolikkum Kollo Irappavar
Sollaatap Poom Uyir.

Explanations
🡱