ನೆನೆದವರ ಶೋಕ

Verses

Holy Kural #1201
(ಮನಸ್ಸಿನಲ್ಲಿ) ನೆನೆದರೆ ಸಾಕು, ತೀರದ ಅತಿಶಯವಾದ ಅನಂದವನ್ನು ಕಾಮವು ಊಟುಮಾಡುವುದರಿಂದ (ಅದು)
ಕಳ್ಳಿಗಿಂತ ಸವಿತಾದುದು.

Tamil Transliteration
Ullinum Theeraap Perumakizh Seydhalaal
Kallinum Kaamam Inidhu.

Explanations
Holy Kural #1202
ತಾವು ಪ್ರೀತಿಸುವವರನ್ನು ನೆನೆಯುವುದರಿಂದ, ವಿರಹದಿದುಂಟಾಗುವ ಸಂಕಟವು ಇಲ್ಲವಾಗುವುದು; ಅದರಿಂದ ಎಲ್ಲಾ ವಿಧದಲ್ಲಿಯೂ
ಕಾಮವೆಮಧುರವಾದುದಲ್ಲವೇ?

Tamil Transliteration
Enaiththonaru Inidhekaan Kaamamdhaam Veezhvaar
Ninaippa Varuvadhondru El.

Explanations
Holy Kural #1203
ನನಗೆ ನೀನು ಬರುವ ಹಾಗ ತೋರಿ ಹಾಗೆ ಅಡಗಿ ಹೋಗುತ್ತಿದೆ. ಹಾಗೇ ಇನಿಯನೂ ನನ್ನನ್ನು ನೆನೆಯುವಂತೆ ನಟಿಸಿ ನೆನೆಯದೆ
ಇರುವರೋ ಏನೋ!

Tamil Transliteration
Ninaippavar Pondru Ninaiyaarkol Thummal
Sinaippadhu Pondru Ketum.

Explanations
Holy Kural #1204
ಹಾಯ್! ನನ್ನ ಹೃದಯದಲ್ಲಿ ನಾನೊಲಿದ ನಲ್ಲನು ನೆಲೆಸಿರುವಂತೆ, ಅವನ ಹೃದಯದಲ್ಲಿ ಕೂಡ ನಾನು ನೆಲಸಿರಬಹುದಲ್ಲವೆ?

Tamil Transliteration
Yaamum Ulengol Avarnenjaththu Ennenjaththu
Oo Ulare Avar.

Explanations
Holy Kural #1205
ತಮ್ಮ ಹೃದಯದಲ್ಲಿ ನಾನು ಪ್ರವೇಶಿಸದಂತೆ ಕಾವಲಿಟ್ಟವರು, ನನ್ನ ಹೃದಯದೊಳಗೆ ಸತತವಾಗಿ ಬರಲು ಅವರಿಗೆ ನಾಚಿಕೆ
ಎನಿಸುವುದಿಲ್ಲವೆ?

Tamil Transliteration
Thamnenjaththu Emmaik Katikontaar Naanaarkol
Emnenjaththu Ovaa Varal.

Explanations
Holy Kural #1206
ಅವರೊಂದಿಗೆ ಸಂಪರ್ಕ ಹೊಂದಿದ (ಮಧುರ) ದಿನಗಳನ್ನು ನೆನೆಯುತ್ತಿರುಉದರಿಂದ ನಾನಿನ್ನೂ ಜೀವಿಸಿದ್ದೇನೆ. (ಇಲ್ಲವಾದರೆ)
ನಾನು ಹೇಗೆ ಜೀವಿಸಿರಲಿ?

Tamil Transliteration
Matriyaan Ennulen Manno Avaroti Yaan
Utranaal Ulla Ulen.

Explanations
Holy Kural #1207
ನಾನವನನ್ನು ಮರೆತರೆ ಏನಾಗಬಲ್ಲೆ! (ಅದರಿಂದಲೇ) ನಾನು ಅವನನ್ನು ಮರೆಯಲಾರೆ! ಅವನನ್ನು ನೆನೆಸಿಕೊಂಡರೂ ಮನಸ್ಸು
ಸುಡುತ್ತದೆ!

Tamil Transliteration
Marappin Evanaavan Markol Marappariyen
Ullinum Ullam Sutum.

Explanations
Holy Kural #1208
ನಾನವರನ್ನು ಎಷ್ಟು ನೆನೆಸಿಕೊಂಡರೂ ಕೂಡ, ಅವರು ಕೋಪಿಸಿಕೊಳ್ಳುವುದಿಲ್ಲ! ನನ್ನ ಕಾದಲರು ತೋರುವ ಕೃಪೆ ಅಷ್ಟೊಂದು.

Tamil Transliteration
Enaiththu Ninaippinum Kaayaar Anaiththandro
Kaadhalar Seyyum Sirappu.

Explanations
Holy Kural #1209
ನಾವಿಬ್ಬರೂ ಬೇರಲ್ಲ ಒಂದು ಅಗಲುವ ಮುಂದೆ ಹೇಳಿದ (ನನ್ನ) ಕಾಲದರ ಕ್ರೂರ ಸ್ವಭಾವವನ್ನು ನೆನೆದು ನನ್ನ ಪ್ರಿಯ ಜೀವವು
ವ್ಯರ್ಥವಾಗುತ್ತಿದೆ!

Tamil Transliteration
Viliyumen Innuyir Verallam Enpaar
Aliyinmai Aatra Ninaindhu.

Explanations
Holy Kural #1210
ತಣ್ಣದಿರನೇ ನೀನು (ನೂರ್ಗಾಲ) ಬಾಳು! ನನ್ನ ಅಂತರಂಗವನ್ನಗಲದೆ, ನನ್ನನ್ನು ಬಿಟ್ಟು ಹೋದವರನ್ನು ನಾನು ಕಾಣುವ ತನಕ
ನೀನು ಮರೆಯಾಗಬೇಡ!

Tamil Transliteration
Vitaaadhu Sendraaraik Kanninaal Kaanap
Pataaadhi Vaazhi Madhi.

Explanations
🡱