ಕೆಲಸ ಮಾಡುವ ಬಗೆ

Verses

Holy Kural #671
ಒಂದು ಕೆಲಸ ಬಗ್ಗೆ, ಹಲವರಲ್ಲಿ ಆಲೋಚಿಸಿ ವಿಚಾರ ಮಾಡಿ ನಿರ್ಧಾರವನ್ನು ಕೈಗೊಳ್ಳಬೇಕು; ಆ ರೀತಿ ಕೈಗೊಂಡ ನಿರ್ಧಾರವನ್ನು
ಕಾಲಹರಣದಿಂದ ನಿರ್ಧಾನಿಸಿದರೆ ಅದರಿಂದ ಕೆಡುಕೇ ಆಗುವುದು.

Tamil Transliteration
Soozhchchi Mutivu Thuniveydhal Aththunivu
Thaazhchchiyul Thangudhal Theedhu.

Explanations
Holy Kural #672
ಕಾಲವನ್ನು ತಾಳಿ ನಿಧಾನಿಸಿ ಮಾಡಬೇಕಾದ ಕೆಲಸವನ್ನು ನಿಧಾನಿಸಿಯೇ ಮಾಡಬೇಕು. ಆಲಸ್ಯವಿಲ್ಲದೆ ಕೂಡಲೇ ಮಾಡಬೇಕಾದ
ಕೆಲಸವನ್ನು ಒಡನೆಯೇ (ಆಲಸ್ಯವಿಲ್ಲವೆ) ಮಾಡಿ ಪೂರೈಸಬೇಕು.

Tamil Transliteration
Thoonguka Thoongich Cheyarpaala Thoongarka
Thoongaadhu Seyyum Vinai.

Explanations
Holy Kural #673
ಸಾಧ್ಯವಿರುವ ಎಡೆಯಲ್ಲೆಲ್ಲ ಕೆಲಸಮಾಡಿ ಮುಗಿಸುವುದು ಒಳ್ಳೆಯುದು. ಸಾಧ್ಯವಾಗದ ಎಡೆಯಲ್ಲಿ ಫಲಪ್ರದವಾಗಬಲ್ಲ್ ಉಛಿತ
ವಿಧಾನಗಳನ್ನು ನೋಡಿ ಅನುಸರಿಸಿ ಮಾಡಬೇಕು.

Tamil Transliteration
Ollumvaa Yellaam Vinainandre Ollaakkaal
Sellumvaai Nokkich Cheyal.

Explanations
Holy Kural #674
ತೊಡಗಿದ ಕೆಲಸ, ಹಗೆತನ, ಈ ಎರಡರ ಉಳಿಕೆಗಳು, ವಿಚಾರ ಮಾಡಿ ನೋಡಿದಾಗ, ಕಿಚ್ಚಿನ ಅವಶೇಷದಂತೆ ಅರಿವಾಗದಂತೆ ವ್ಯಾಪಿಸಿ
ಕೆಡುಕುಂಟು ಮಾಡುತ್ತವೆ.

Tamil Transliteration
Vinaipakai Endrirantin Echcham Ninaiyungaal
Theeyechcham Polath Therum.

Explanations
Holy Kural #675
ಹಣ, ಸಾಧನ, ಕಾಲ, ಕೆಲಸ, ಸ್ಥಳ- ಈ ಐದರ ವಿಷಯದಲ್ಲಿಯೂ ವಿಸ್ತರಣೆಗೆ ಎಡೆಕೊಡದೆ, ಆಲೋಚಿಸಿ ಮಾಡಬೇಕು.

Tamil Transliteration
Porulkaruvi Kaalam Vinaiyitanotu Aindhum
Iruldheera Ennich Cheyal.

Explanations
Holy Kural #676
ಕೆಲಸವನ್ನು ಮುಗಿಸುವ ರೀತಿ, ನಡುವೆ ಬರುವ ಅಡಚಣೆಗಳು, ಮುಗಿದ ಮೇಲೆ ದೊರೆಯುವ ಹಿರಿಯ ಪ್ರಯೋಜನ ಇವುಗಳನ್ನು
ವಿಚಾರಮಾಡೀ ಕೆಲಸದಲ್ಲಿ ತೊಡಗಬೇಕು.

Tamil Transliteration
Mutivum Itaiyoorum Mutriyaangu Eydhum
Patupayanum Paarththuch Cheyal.

Explanations
Holy Kural #677
ಒಂದು ಕೆಲಸದಲ್ಲಿ ತೊಡಗಿದವನು ಮಾಡಬೇಕಾದ ಕರ್ತವ್ಯವೆಂದರೆ, ಆ ಕೆಲಸದ ರಹಸ್ಯವನ್ನು ಚೆನ್ನಾಗಿ ತಿಳಿದವನ ಸಲಹೆಯನ್ನು
ಪಡೆದುಕೊಳ್ಳುವುದು.

Tamil Transliteration
Seyvinai Seyvaan Seyanmurai Avvinai
Ullarivaan Ullam Kolal.

Explanations
Holy Kural #678
ಒಂದು ಕೆಲಸದಿಂದ ಮತ್ತೊಂದು ಕೆಲಸವು ಆಗುವಂತೆ ಮಾಡೀಕೊಳ್ಳುವುದು. ಮದವುಳ್ಳ ಆನೆಯ ಸಹಾಯದಿಂದ ಮತ್ತೊಂದು ಆನೆಯನ್ನು
ಹಿಡಿಯವಂತೆ.

Tamil Transliteration
Vinaiyaan Vinaiyaakkik Kotal Nanaikavul
Yaanaiyaal Yaanaiyaath Thatru.

Explanations
Holy Kural #679
ಸ್ನೇಹಿತರಾದವರಿಗೆ ಒಳ್ಳೆಯುದು ಮಾಡದಕ್ಕಿಂತ ಮುಖ್ಯವಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ, ಶತ್ರುಗಳನ್ನು ತಮ್ಮ
ಸಮೀಪಕ್ಕೆ ಸೆಳೆದುಕೊಳ್ಳುವುದು.

Tamil Transliteration
Nattaarkku Nalla Seyalin Viraindhadhe
Ottaarai Ottik Kolal.

Explanations
Holy Kural #680
ಸಣ್ಣಪುಟ್ಟ ಮಾಡಲಿಕರಾದವರು, ತಮ್ಮ ಪ್ರಜೆಗಳು ಶತ್ರುಗಳಿಂದ ಭೀತರಾದಾಗ, ತಮಗಿಂತ ಬಲಿಷ್ಠರಾದ ಹಗೆಗಳು ತಮಗೆ ಕ್ಷಮೆತೋರಿ
ಸಂಧಿಗೆ ಅವಕಾಶ ಕೊಟ್ಟರೆ ಅವರ ಸಾಮಂತಿಕೆಯನ್ನು ತೆಲೆಬಾಗಿ ಒಪ್ಪಿಕೊಳ್ಳುತ್ತಾರೆ.

Tamil Transliteration
Uraisiriyaar Ulnatungal Anjik Kuraiperin
Kolvar Periyaarp Panindhu.

Explanations
🡱