ಕಳ್ಳು ಕುಡಿಯದಿರುವುದು
Verses
ಕಳ್ಳನ್ನು ಪ್ರೀತಿಸಿ ಅದಕ್ಕೆ ದಾಸರಾಗಿರುವ ಅರಸರು ಯಾವಾಗಲೂ, ಹಗೆಗಳಲ್ಲಿ ಭೀತಿಯನ್ನುಂಟು ಮಾಡಲಾರರು; ಪ್ರತಿಯಾಗಿ ತಮ್ಮ
ಕೀರ್ತಿಯನ್ನು ಕೆಡಿಸಿಕೊಳ್ಳುವರು.
Tamil Transliteration
Utkap Pataaar Oliyizhappar Egngnaandrum
Katkaadhal Kontozhuku Vaar.
ಕಳ್ಳನ್ನು ಕುಡಿಯಬಾರದು; ಸಜ್ಜನರ ಗೌರವಕ್ಕೆ ಪಾತ್ರರಾಗಲು ಇಚ್ಛಿಸದವರು ಬೇಕಾದರೆ ಕುಡಿಯಲಿ!
Tamil Transliteration
Unnarka Kallai Unilunka Saandroraan
Ennap Pataventaa Thaar.
ಮಗ ಹೇಗ ನಡೆದುಕೊಂಡರೂ ತಾಯಿಗೆ ಇಷ್ಟವೇ ಆಗುವುದಾದರೂ ಕಳ್ಳು ಕುಡಿದು ಅಮಲಿನಲ್ಲಿ ಸ್ವೇಚ್ಛಿಯಾಗಿ ವರ್ತಿಸುವುದು
ಅವಳಿಗೆ ಸಹಿಸದು; ಹಾಗಿರುವಾಗ ಸಜ್ಜನರ ಮುಂದೆ ಕುಡಿದು ಸ್ವೇಚ್ಛಿಯಾಗಿ ವರ್ತಿಸಿದರೆ ಹೇಗೆ ಸಹಿಸಬಲ್ಲರು?
Tamil Transliteration
Eendraal Mukaththeyum Innaadhaal Enmatruch
Chaandror Mukaththuk Kali.
ಕಳ್ಳು ಕುಡಿಯುವ, ತ್ಯಾಜ್ಯಾವಾದ ದೊಡ್ಡ ಅಪರಾಧ ಮಾಡೀದವರಿಗೆ ನಾಚಿಕೆಯೆಂಬ ಸಜ್ಜನ ವಧು ಬೆನ್ನು ತೋರಿಸಿ ಹೊರಟು
ಹೋಗುವಳು.
Tamil Transliteration
Naanennum Nallaal Purangotukkum Kallennum
Penaap Perungutrath Thaarkku.
ಹಣ ತೆತ್ತು ಮೈಯರಿಯದ ಸ್ಥಿತಿಯನ್ನು ತಂದುಕೊಳ್ಳುವುದು, ತಾನು ಮಾಡುವ ಕೆಲಸದ ಅರಿವುಗೇಡಿತನವನ್ನು
ಸಂಪಾದಿಸಿದಂತೆಯೇ.
Tamil Transliteration
Kaiyari Yaamai Utaiththe Porulkotuththu
Meyyari Yaamai Kolal.
ಕಳ್ಳಿನ ಅಮಲಿನಲ್ಲಿ ಮೈಮರೆತು ಮಲಗಿದವರು ಸತ್ತವರಿಗಿಂತ ಬೇರೆ ಅಲ್ಲ; ಕಳ್ಳು ಕುಡಿದವರು ನಂಜುಣ್ಣುವವರೆ ಆಗುತ್ತಾರೆ.
Tamil Transliteration
Thunjinaar Seththaarin Verallar Egngnaandrum
Nanjunpaar Kallun Pavar.
ಕಳ್ಳಿಗೆ ಸೋತು ಬಲಿಯಾದವರು, (ತಮ್ಮ ಅಮಲಿನಿಂದ) ಯಾವಾಗಲೂ, ತಮ್ಮ ಮನಸ್ಸನ್ನು ಪ್ರಕಟಪಡಿಸಿ ಊರ ನಗೆಗೆ
ಪಾತ್ರರಾಗುವರು.
Tamil Transliteration
Ullotri Ulloor Nakappatuvar Egngnaandrum
Kallotrik Kansaai Pavar.
"ನಾನು ಕಳ್ಳು ಕುಡಿದರಿಯೆನು" ಎಂದು ಕಳ್ಳು ಕುಡಿಯುವವನು ಹೇಳುವುದನ್ನು ಕೈಬಿಡಬೇಕು; ಅವನು ಕಳ್ಳು ಕುಡಿದಾಗಲೇ ಅವನ
ಮನಸ್ಸಿನೊಳಗಿನ ದೌರ್ಬಲ್ಯವೆಲ್ಲ ಹೊರಗೆ ಬರುವುದು.
Tamil Transliteration
Kaliththariyen Enpadhu Kaivituka Nenjaththu
Oliththadhooum Aange Mikum.
ಕುಡಿದ ಅಮಲಿನಲ್ಲಿರುವವನಿಗೆ ಕಾರಣ ಹೇಳಿ ತಿಳಿಯಪಡಿಸುವುದು, ನೀರಿನಡಿಯಲ್ಲಿ ಮುಳುಗಿದವನನ್ನು, ಕೊಳ್ಳಿ ದೀಪವನ್ನು
ಹಿಡಿದುಕೊಂಡು ಅರಸಿದಂತೆ.
Tamil Transliteration
Kaliththaanaik Kaaranam Kaattudhal Keezhneerk
Kuliththaanaith Theeththureei Atru.
ಒಬ್ಬನು ತಾನು ಕಳ್ಳು ಕುಡಿಯದಿರುವಾಗ, ಕಳ್ಳಿನ ಅಮಲಿನಲ್ಲಿ ಇರುವವನನ್ನು ಕಂಡಾದ ಕಳ್ಳು ಕುಡಿಯುವುದರಿಂದ ಆಗುವ ಕೆಡುಕನ್ನು
ಯೋಚಿಸಲಾರನೆ?
Tamil Transliteration
Kallunnaap Pozhdhir Kaliththaanaik Kaanungaal
Ullaankol Untadhan Sorvu.