ಅರಿವುಗೇಡಿತನ
Verses
ಅರಿವುಗೇಡಿತನವು ದಾರಿದ್ರ್ಯದೊಳಗೇ ಅತಿ ಕ್ರೂರವಾದುದು; ಮತ್ತಿತರ ಸಿರಿ ಮೊದಲಾದವುಗಳ ದಾರಿದ್ರ್ಯವನ್ನು ಲೋಕವು (ಅಷ್ಟಾಗಿ) ಗಣನೆಗೆ ತೆಗೆದುಕೊಳ್ಳುವುದಿಲ್ಲ.
Tamil Transliteration
Arivinmai Inmaiyul Inmai Piridhinmai
Inmaiyaa Vaiyaa Thulaku.
ಅರಿವುಗೇಡಿಯು ಮನಃಪೂರ್ವಕವಾಗಿ ಒಂದು ವಸ್ತುವನ್ನು ಯಾರಿಗಾದರೂ ಕೊಟ್ಟರೆ, ಅದು ಅವನ ಒಳ್ಳೆಯ ಗುಣವನ್ನು ಸಾರುವುದಕ್ಕಿಂತ ಪಡೆಯುವವನ ಸತ್ಕರ್ಮವನ್ನು ಸಾರುವುದು.
Tamil Transliteration
Arivilaan Nenjuvandhu Eedhal Piridhiyaadhum
Illai Peruvaan Thavam.
ಅರಿವುಗೇಡಿಗಳುತಮಗೆ ತಾವೇ ತಂದೊಡ್ಡಿಕೊಳ್ಳುವ ಸಂಕಟ ಪರಿಸ್ಥಿತಿಯನ್ನು ಅವರ ಶತ್ರುಗಳೂ ಉಂಟುಮಾಡುವುದು ಅಸಾಧ್ಯ.
Tamil Transliteration
Arivilaar Thaandhammaip Peezhikkum Peezhai
Seruvaarkkum Seydhal Aridhu.
ಅರಿವುಗೇಡಿತನ ಯಾವುದೆಂದರೆ, ನಾನು "ಜ್ಞಾನಿ" ಎಂದು ಹೇಳಿಕೊಳ್ಳುವ ಅಹಂಕಾರವೇ.
Tamil Transliteration
Venmai Enappatuva Thiyaadhenin Onmai
Utaiyamyaam Ennum Serukku.
ಮೂರ್ಖರು ತಾವು ಓದದಿರುವುದನ್ನು ಗ್ರಂಥಗಳನ್ನು ಓದಿರುವಂತೆ ನಟಸುವುದರಿಂದ ಅವರು ಓದಿರುವ ವಿಷಯಗಳಲ್ಲಿ ಕೂಡ ಇತರರಿಗೆ ಸಂಶಯ ಬರಲು ಕಾರಣವಾಗುತ್ತದೆ.
Tamil Transliteration
Kallaadha Merkon Tozhukal Kasatara
Valladhooum Aiyam Tharum.
ತಮ್ಮ ದೋಷಗಳನ್ನು ತಿಳಿದು ಅವುಗಳನ್ನು ಮರೆಸಲು ಯತ್ನಿಸದಿದ್ದರೆ ತಮ್ಮ ಮಾನವನ್ನು ಬಟ್ಟೆಗಳಿಂದ ಮರೆಮಾಚುವುದು ಅರಿವುಗೇಡಿತನವಾಗುತ್ತದೆ.
Tamil Transliteration
Atram Maraiththalo Pullarivu Thamvayin
Kutram Maraiyaa Vazhi.
ಬಹು ಮುಖ್ಯವಾದ ಉಪದೇಶವನ್ನು ವಿಷಯವನ್ನು ಕಾಪಾಡಿಕೊಳ್ಳಲಾರದೆ ನಿರ್ಲಕ್ಷ್ಯ ಮಾಡುವ ಅರಿವಿಲ್ಲದವನು, ತಾನೇ ತನಗೆ ದೊಡ್ಡ ಕುತ್ತನ್ನು ತಂದುಕೊಳ್ಳುತ್ತಾನೆ.
Tamil Transliteration
Arumarai Sorum Arivilaan Seyyum
Perumirai Thaane Thanakku.
. ಅರಿವುಗೇಡಿಯು ತಿಳಿದವರು ಒಳ್ಳೆಯದನ್ನು ಹೇಳಿದರೂ ಪಾಲಿಸನು; ತಾನೂ ಅದನ್ನು ಅರಿತುಕೊಳ್ಳಲಾರನು; ಇಂಥವನ ಬದುಕು ಸಾಯುವವರೆಗೂ ಒಂದು ಕುತ್ತಾಗಿ ಪರಿಣಮಿಸುವುದು.
Tamil Transliteration
Evavum Seykalaan Thaandheraan Avvuyir
Poom Alavumor Noi.
ಅರಿವುಗೇಡಿಗೆ, ಅರಿವು ಮೂಡಿಸಲು ಹೋಗುವವನು ಕೊನೆಯಲ್ಲಿ ತಾನೇ ಬುದ್ಧಿಗೇಡಿಯಾಗಿ ಬಿಡುವನು; ಅರಿವಿಲ್ಲದವನು ತಾನು ಕಂಡ ರೀತಿಯಲ್ಲಿ ತಿಳಿದವನ ಹಾಗೆ ತೋರ್ಪಡಿಸಿಕೊಳ್ಳುವನು.
Tamil Transliteration
Kaanaadhaan Kaattuvaan Thaankaanaan Kaanaadhaan
Kantaanaam Thaankanta Vaaru.
ಲೋಕದಲ್ಲಿ ಬಲ್ಲ ಹಿರಿಯ ಅನುಭವಿಗಳು ಇದೆ ಎನ್ನುವುದನ್ನು ಇಲ್ಲ ಎಂದು ಹೇಳುವವನು, ಭೂಮಿಯ ಮೇಲೆ ಸುಳಿದಾಡುವ ಪಿಶಾಚಿಕೆ ಸಮಾನ ಎಂದು ಭಾವಿಸಬೇಕು.
Tamil Transliteration
Ulakaththaar Untenpadhu Illenpaan Vaiyaththu
Alakaiyaa Vaikkap Patum.