ಅರಿವು

Verses

Holy Kural #421
ಅರಿವು ಎನ್ನುವುದು ಅಳಿವುಂಟಾಗದಂತೆ ರಕ್ಷಿಸುವ ಆಯುಧ; ಅಲ್ಲದೆ ಶತ್ರುಗಳಿಗೂ ಎದುರಿಸಲಾಗದ ಭದ್ರವಾದ ಕೋಟೆ ಎನಿಸುವುದು.

Tamil Transliteration
421 Arivatrang Kaakkung Karuvi Seruvaarkkum
Ullazhikka Laakaa Aran.

Explanations
Holy Kural #422
ಮನಸ್ಸನ್ನು ಹೋದೆಡೆಗೆಲ್ಲಾ ಹೋಗಲು ಬಿಡದೆ, ಕೆಟ್ಟ ವಿಚಾರಗಳಿಂದ ದೂರ ಮಾಡಿ, ಒಳ್ಳೆಯ ಮಾರ್ಗದಲ್ಲಿ ಒಯ್ಯುವುದೇ ಅರಿವು.

Tamil Transliteration
Sendra Itaththaal Selavitaa Theedhoreei
Nandrinpaal Uyppa Tharivu.

Explanations
Holy Kural #423
ಯಾವ ವಿಷಯವನ್ನೇ ಆಗಲಿ, ಯಾರಿಂದ ಕೇಳಿ ತಿಳಿದುಕೊಂಡರೂ, ಆ ವಿಷಯದ ಸತ್ಯವನ್ನು ಕಂಡುಕೊಳ್ಳುವುದೇ ಶುದ್ಧವಾದ ಅರಿವು.

Tamil Transliteration
Epporul Yaaryaarvaaik Ketpinum Apporul
Meypporul Kaanpa Tharivu.

Explanations
Holy Kural #424
ತಾನು ಒಂದು ವಿಷಯವನ್ನು ಹೇಳುವಾಗ, ಅದು ಜೆನ್ನಾಗಿ ಪ್ರತಿಫಲಿಸುವಂತೆ ಸರಳವಾಗಿ, ಮನಮುಟ್ಟುವಂತೆ ಹೇಳಿ, ಇತರರಿಂದ ತಿಳಿದ ವಿಷಯಗಳಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಕಂಡುಕೊಳ್ಳುವುದೇ ಅರಿವು.

Tamil Transliteration
Enporula Vaakach Chelachchollith Thaanpirarvaai
Nunporul Kaanpa Tharivu.

Explanations
Holy Kural #425
ಲೋಕದಲ್ಲಿ ಮಹನೀಯರಾದವರ ಸ್ನೇಹ ಮಾಡುವುದು, ಆ ಸ್ನೇಹವು ಕಮಲದ ಹೂವಿನಂತೆ ಒಮ್ಮೆ ಅರಳುವುದಾಗಲೀ, ಮತ್ತೊಮ್ಮೆ ಮುಚ್ಚಿಕೊಳ್ಳುವುದಾಗಲೀ ಇರದೆ, ಸದಾ ಒಂದೇ ಸಮನಾಗಿರುವಂತೆ ಮಾಡುವುದು ಅರಿವು.

Tamil Transliteration
Ulakam Thazheeiya Thotpam Malardhalum
Koompalum Illa Tharivu.

Explanations
Holy Kural #426
ಲೋಕವು ಹೇಗೆ ನಡೆದುಕೊಳ್ಳುವುದೋ ಅದಕ್ಕೆ ಹೊಂದಿಕೊಂಡಂತೆ ತಾನೂ ಬಾಳುವುದೇ ಅರಿವು.

Tamil Transliteration
Evva Thuraivadhu Ulakam Ulakaththotu
Avva Thuraiva Tharivu.

Explanations
Holy Kural #427
ಅರಿವುಳ್ಳವರು ಮುಂದೆ ಆಗುವುದನ್ನು ಅರಿಯಬಲ್ಲರು; ಅರಿವಿಲ್ಲದವರು ಅದನ್ನರಿಯಲು ಅಸಮರ್ಥರು.

Tamil Transliteration
Arivutaiyaar Aava Tharivaar Arivilaar
Aqdhari Kallaa Thavar.

Explanations
Holy Kural #428
ಅಂಜಬೇಕಾದ ವಿಷಯಗಳಲ್ಲಿ ಹೆದರದಿರುವುದು ಮೂರ್ಖತನವೆನ್ನಿಸುವುದು; ಅಂಜಬೇಕಾದ ವಿಷಯಗಳಲ್ಲಿ ಅಂಜಿ ನಡೆದುಕೊಳ್ಳುವುದೇ ಅರಿವುಳ್ಳವರ ಧರ್ಮ.

Tamil Transliteration
Anjuva Thanjaamai Pedhaimai Anjuvadhu
Anjal Arivaar Thozhil.

Explanations
Holy Kural #429
ಮುಂದೆ ಬರುವುದನ್ನು ಮೊದಲೇ ತಿಳಿದುಕೊಂಡು, ತಮ್ಮನ್ನು ಕಾದುಕೊಳ್ಳಬಲ್ಲ ಅರಿವುಳ್ಳವರಿಗೆ, ತತ್ತರಿಸುವಂತೆ ಬರುವ ಕಷ್ಟ ನೋವುಗಳೊಂದೂ ಇರುವುದಿಲ್ಲ.

Tamil Transliteration
Edhiradhaak Kaakkum Arivinaark Killai
Adhira Varuvadhor Noi.

Explanations
Holy Kural #430
ಅರಿವುಳ್ಲವರು (ದರಿದ್ರರಾಗಿದ್ದರೂ) ಎಲ್ಲವನ್ನೂ ಉಳ್ಳವರು; ಅರಿವಿಲ್ಲದವರು, ಎಲ್ಲವನ್ನು ಉಳ್ಳವರಾಗಿದ್ದರೂ ಏನೂ ಇಲ್ಲದ ದರಿದ್ರರೇ.

Tamil Transliteration
Arivutaiyaar Ellaa Mutaiyaar Arivilaar
Ennutaiya Renum Ilar.

Explanations
🡱